Swamiji Message

ಶ್ರೀ ಹೇಮವೇಮ ಸಾಧ್ಬೋಧನ ಟ್ರಸ್ಟ್

ಶ್ರೀ ಮಹಾಯೋಗಿವೇಮ ಮಠವು ವಿಶಾಲವಾದ ಗ್ರಾಮೀಣ ಸೊಬಗಿನ ಹಚ್ಚಹಸಿರಿನ ತುಂಗಭದ್ರಾ ತಟದಲ್ಲಿ ಸ್ಥಾಪಿತಗೊಂಡಿದ್ದು ಶ್ರೀ ಪರಂಪರೆಯವು ಬಡ ಮತ್ತು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಶೈಕ್ಷಣಿಕವಾಗಿ ಪ್ರಗತಿಸದಿಸುವುದಾಗಿದೆ.ಮಕ್ಕಳಲ್ಲಿ ಭಾರತೀಯ ಆಧ್ಯಾತ್ಮಿಕ ಪರಂಪರೆಯ ತಿಳುವಳಿಕೆ ಹಾಗೂ ಧ್ಯಾನ ಪರಂಪರೆಯನ್ನು ಪ್ರಚಾರಪಡಿಸುವುದಾಗಿದೆ.

ಮಕ್ಕಳಲ್ಲಿ ಸದೃಡ ಆರೋಗ್ಯವನ್ನು ಯೋಗ ಸಾಧನೆಯ ಮೂಲಕ ಉಂಟುಮಾಡುವುದು. ವಿದ್ಯಾರ್ಥಿಗಳಲ್ಲಿ ಸಂಸ್ಕಾರ ದೇಶಿ ಸಂಸ್ಕೃತಿಯನ್ನು ಸಾಕಾರಗೊಳಿಸುವುದು ರಾಷ್ಟ್ರಪ್ರೇಮ, ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವುದು ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪ್ರಾತಿನಿಧ್ಯತೆಯನ್ನು ನೀಡಲಾಗುವುದು.

ಪ್ರಸ್ತುತ ಸಮಾಜದಲ್ಲಿ ಸ್ಪರ್ಧಾತ್ಮಿಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವುದರ ಮೂಲಕ ವಿದ್ಯಾರ್ಥಿಗಲ್ಲಿ ವೃತ್ತಿಪರ ಕೊರ್ಸುಗೆ ತರಬೇತಿ ನೀಡುವ ಮಹದಾಶಯವನ್ನು ಹೊಂದಿರುವುದರಿಂದ ಶ್ರೀ ಮಠದಲ್ಲಿ ಹೇಮವೇಮ ಸದ್ಬೋದನ ಟ್ರಸ್ಟ್ (ರಿ) ಅಡಿಯಲ್ಲಿ ಮಹಾಯೋಗಿ ವೇಮನ ಪಿ.ಯು ಕಾಲೇಜನ್ನು ೨೦೧೯-೨೦ ನೇ ಸಾಲಿನಲ್ಲಿ ಪ್ರಾರಂಭಿಸಿದ್ದು ನುರಿತು ಪ್ರತಿಭಾವಂತ ಸಮರ್ಪಣಾ ಮನೋಭಾವ ಹೊಂದಿರುವ ಸುಸಜ್ಜಿತ ಬೋಧನವರ್ಗ ಹಾಗೂ ಅತ್ಯಾಧುನಿಕ ತಂತಜ್ಞನಾ ಆಧಾರಿತ ತರಬೇತಿ ಹಾಗೂ ವಿಶೇಷ ಸೌಲಭ್ಯಗಳನ್ನು ಹೊಂದಿದ್ದು ಇದರ ಉಪಯೋಗವನ್ನು ಎಲ್ಲ ವಿದ್ಯಾರ್ಥಿ ಸಮುದಾಯವು ಪಡೆದುಕೊಳ್ಳಬೇಕಾಗಿ ಆಶಿಸಲಾಗಿದೆ. ಶುಭ ಆಶೀರ್ವಾದಗಳೊಂದಿಗೆ.